Home / ರಾಜ್ಯ / ನ್ಯೂಸ್ ಪೇಪರ್ ತೆಗೆಯೋಕೆ ನಾಚಿಕೆ ಆಗ್ತಿದೆ! ಕರ...

ನ್ಯೂಸ್ ಪೇಪರ್ ತೆಗೆಯೋಕೆ ನಾಚಿಕೆ ಆಗ್ತಿದೆ! ಕರ್ನಾಟಕ ರಾಜಕಾರಣದಲ್ಲಿ CD, ಸ್ಟಿಂಗ್ ಆಪರೇಷನ್ ಸಂಸ್ಕೃತಿ ನಿಲ್ಲಬೇಕು - ತೇಜಸ್ವಿ ಸೂರ್ಯ ಕಿಡಿ

E
By ETV 24X7 Chief Admin
November 3, 2026 195 views 0 comments Edit Article
ನ್ಯೂಸ್ ಪೇಪರ್ ತೆಗೆಯೋಕೆ ನಾಚಿಕೆ ಆಗ್ತಿದೆ! ಕರ್ನಾಟಕ ರಾಜಕಾರಣದಲ್ಲಿ CD, ಸ್ಟಿಂಗ್ ಆಪರೇಷನ್ ಸಂಸ್ಕೃತಿ ನಿಲ್ಲಬೇಕು - ತೇಜಸ್ವಿ ಸೂರ್ಯ ಕಿಡಿ

ಕರ್ನಾಟಕದ ರಾಜಕಾರಣದಲ್ಲಿ ಇತ್ತೀಚೆಗೆ ನಡೆಯುತ್ತಿರುವ CD, ಸ್ಟಿಂಗ್ ಆಪರೇಷನ್, ಅಶ್ಲೀಲ ವಿಡಿಯೋಗಳ ಪ್ರಕರಣಗಳ ಬಗ್ಗೆ ಸಂಸದ ತೇಜಸ್ವಿ ಸೂರ್ಯ ತೀವ್ರ ಬೇಸರ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಕರ್ನಾಟಕದಲ್ಲಿ CD, ಸ್ಟಿಂಗ್ ಆಪರೇಷನ್ ಸಂಸ್ಕೃತಿಗೆ ಬೇಸತ್ತ ತೇಜಸ್ವಿ ಸೂರ್ಯ - ಮಹಿಳೆಯರು ರಾಜಕಾರಣಕ್ಕೆ ಬರೋದು ಹೇಗೆ?"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಒಬ್ಬ ಯುವಕನಾಗಿ, ಒಬ್ಬ ಕನ್ನಡದ ಯುವಕನಾಗಿ ಬಹಳ ಮನನೊಂದು ಈ ವಿಷಯ ಹೇಳುತ್ತಿದ್ದೇನೆ ಎಂದು ಹೇಳಿದ ಅವರು, ಇಂದು ಬೆಳಿಗ್ಗೆ ನ್ಯೂಸ್ ಪೇಪರ್ ತೆಗೆದರೆ, ಟಿವಿ ಆನ್ ಮಾಡಿದರೆ, ಸೋಶಿಯಲ್ ಮೀಡಿಯಾ ನೋಡಿದರೆ ಸ್ಟಿಂಗ್ ಆಪರೇಷನ್, ಇನ್ನೊಬ್ಬರ CD, ವೀಡಿಯೋ ಎಂಬ ಹೆಡ್‌ಲೈನ್‌ಗಳು ಅಸಹ್ಯ ತರಿಸುತ್ತಿವೆ ಎಂದರು.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಮನೆಯಲ್ಲಿ ತಂದೆ-ತಾಯಿ, ಹೆಣ್ಣು ಮಕ್ಕಳು ಕೂತು ಪೇಪರ್ ಓದಲು, ಟಿವಿ ನೋಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೇರೆ ರಾಜ್ಯಗಳಿಗೆ ಹೋದಾಗ ಕರ್ನಾಟಕದ ರಾಜಕಾರಣ ಬರೀ ಇದೇನಾ ಎಂದು ನಗುತ್ತಾರೆ. ಇಂತಹ ಅಸಹ್ಯದ ಪರಂಪರೆ ಅಂತ್ಯವಾಗಬೇಕು ಎಂದು ಒತ್ತಾಯಿಸಿದರು.

ಯಾವ ಪಕ್ಷದವರೇ ಆಗಲಿ, ಬ್ಲ್ಯಾಕ್‌ಮೇಲ್ ಮಾಡುವವರಿಗೆ ಕಠಿಣ ಶಿಕ್ಷೆಯಾಗಬೇಕು. ನಾವು ಮಹಿಳೆಯರಿಗೆ 33% ಮೀಸಲಾತಿ ಕೊಟ್ಟು ರಾಜಕಾರಣಕ್ಕೆ ಕರೆತರಲು ಪ್ರಯತ್ನಿಸುತ್ತಿರುವಾಗ, ಇಂತಹ CD, ವೀಡಿಯೋ ಸಂಸ್ಕೃತಿ ಇದ್ದರೆ ಯಾವ ಗೌರವಾನ್ವಿತ ಕುಟುಂಬ ತಮ್ಮ ಹೆಣ್ಣು ಮಕ್ಕಳನ್ನು ರಾಜಕಾರಣಕ್ಕೆ ಕಳುಹಿಸುತ್ತದೆ ಎಂದು ಪ್ರಶ್ನಿಸಿದರು.

ತಾವು 28ನೇ ವಯಸ್ಸಿಗೆ ಸಂಸದರಾಗಿದ್ದು, ರಾಜಕೀಯ ಕುಟುಂಬದಿಂದ ಬಾರದ ಸಾಮಾನ್ಯ ಯುವಕರಿಗೆ ಹೆಚ್ಚಿನ ಅವಕಾಶ ಸಿಗಬೇಕು ಎಂದು ಅವರು ಹೇಳಿದರು

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.