Home / ಕ್ರೈಂ / ಬಾರ್‌ನಲ್ಲಿ ಜಗಳ ಬಿಡಿಸಲು ಹೋದವನಿಗೆ ಚಾ**ಕು ಇ...

ಬಾರ್‌ನಲ್ಲಿ ಜಗಳ ಬಿಡಿಸಲು ಹೋದವನಿಗೆ ಚಾ**ಕು ಇ*ತ! ಹೊಟ್ಟೆ, ಬೆನ್ನು, ಕೈಗೆ ಗಂಭೀರ ಗಾಯ - ಕಿಮ್ಸ್‌ನಲ್ಲಿ ಚಿಕಿತ್ಸೆ!

E
By ETV 24X7 Chief Admin
November 7, 2026 280 views 0 comments Edit Article
ಬಾರ್‌ನಲ್ಲಿ ಜಗಳ ಬಿಡಿಸಲು ಹೋದವನಿಗೆ ಚಾ**ಕು ಇ*ತ! ಹೊಟ್ಟೆ, ಬೆನ್ನು, ಕೈಗೆ ಗಂಭೀರ ಗಾಯ - ಕಿಮ್ಸ್‌ನಲ್ಲಿ ಚಿಕಿತ್ಸೆ!

ಧಾರವಾಡದ ಶ್ರೀನಗರ ವೃತ್ತದಲ್ಲಿರುವ ಬಾರ್‌ನಲ್ಲಿ ಈ ಘಟನೆ ನಡೆದಿದೆ. ಚಾಕು ಇರಿತಕ್ಕೊಳಗಾದ ಯುವಕನನ್ನ ಅಕ್ಷಯ್, 29 ವರ್ಷ ಎಂದು ಗುರುತಿಸಲಾಗಿದೆ.

ಬಾರ್‌ನಲ್ಲಿ ಕುಳಿತು ಮದ್ಯಪಾನ ಮಾಡುತ್ತಿದ್ದ ವೇಳೆ ಕೆಲವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ಅಕ್ಷಯ್ ಮಧ್ಯಪ್ರವೇಶಿಸಿ ಬಿಡಿಸಲು ಮುಂದಾಗಿದ್ದಾನೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಬಾರ್‌ನಲ್ಲಿ ಜಗಳ ಬಿಡಿಸಲು ಹೋದವನಿಗೆ ಚಾಕು ಇರಿತ! ಹೊಟ್ಟೆ, ಬೆನ್ನು, ಕೈಗೆ ಗಂಭೀರ ಗಾಯ - ಕಿಮ್ಸ್‌ನಲ್ಲಿ ಚಿಕಿತ್ಸೆ!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಈ ವೇಳೆ ಆರೇಳು ಜನರ ಗುಂಪು ಆತನ ಮೇಲೆ ಚಾಕುವಿನಿಂದ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ.

ದಾಳಿಯಲ್ಲಿ ಅಕ್ಷಯ್‌ನ ಹೊಟ್ಟೆ ಭಾಗಕ್ಕೆ ಗಂಭೀರ ಗಾಯವಾಗಿದ್ದು, ಬೆನ್ನು ಹಾಗೂ ಕೈಗಳಿಗೂ ಚಾಕುವಿನಿಂದ ಇರಿಯಲಾಗಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ತೀವ್ರವಾಗಿ ಗಾಯಗೊಂಡ ಯುವಕನನ್ನು ಕೂಡಲೇ ಧಾರವಾಡ ಸಿವಿಲ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಕಿಮ್ಸ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಘಟನೆ ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಜಗಳಕ್ಕೆ ನಿಖರ ಕಾರಣ ಹಾಗೂ ದಾಳಿಕೋರರ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.