ಹುಬ್ಬಳ್ಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಅವರು ಸಿದ್ದ ರಾಮಯ್ಯ CD ಬಗ್ಗೆ ಮಾತನಾಡಿದ ಆರ್ ಅಶೋಕ್ ಅವರು, "ಈ ವಿಚಾರದಲ್ಲಿ ನಾವು ಆರೋಪ ಮಾಡುತ್ತಿಲ್ಲ, ಕಾಂಗ್ರೆಸ್ನ ಹಿರಿಯ ನಾಯಕ BK ಹರಿಪ್ರಸಾದ್ ಅವರೇ 12ನೇ ಇಸವಿಯದ್ದು ಇಟ್ಕೊಂಡು ಬ್ಲಾಕ್ಮೇಲ್ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ.
ಇನ್ನು ಮಾಜಿ ಸಚಿವ ರಾಜಣ್ಣ ಅವರು ಇದು 12 ಅಲ್ಲ 17ರಲ್ಲಿ ಆಗಿದ್ದು ಅಂತ ಹೇಳಿದ್ದಾರೆ. ಯತೀಂದ್ರ ಅವರು ಮೈಸೂರಲ್ಲಿ ಇದೆಲ್ಲ ಮಾಡಿಸಿದ್ದು ನಮ್ಮ ಕಾಂಗ್ರೆಸ್ನ ದೊಡ್ಡ ನಾಯಕರು, ಮಹಾ ನಾಯಕರು ಅಂತ ಹೇಳಿದ್ದಾರೆ. ಇನ್ನೆಲ್ಲಿ ಸರ್ಟಿಫಿಕೇಟ್ ಬೇಕು? ಪಾರ್ಟಿದು ಆಯ್ತು, ಸರ್ಕಾರದ್ದು ಆಯ್ತು, ಅವರ ಮಗನದ್ದು ಆಯ್ತು" ಎಂದು ಹೇಳಿದರು.
ತಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ವೈಯಕ್ತಿಕ ಟೀಕೆಗಳ ಬದಲು ರಾಜ್ಯದ ಅಭಿವೃದ್ಧಿ, ರೈತರು ಮತ್ತು ಬರಗಾಲದ ಬಗ್ಗೆ ಚರ್ಚೆ ಮಾಡಬೇಕು. ಈ ವಿಚಾರವನ್ನು ಡೈವರ್ಟ್ ಮಾಡಬಾರದು ಎಂದು ಹೇಳಿದರು.