Home / ಕ್ರೈಂ / ಹಳೇ ದ್ವೇಷಕ್ಕೆ ಯುವಕನ ಮೇಲೆ ಹಲ್ಲೆ .ಹಾಕಿ ಸ್ಟ...

ಹಳೇ ದ್ವೇಷಕ್ಕೆ ಯುವಕನ ಮೇಲೆ ಹಲ್ಲೆ .ಹಾಕಿ ಸ್ಟಿಕ್ ರಾಡನಿಂದ ಅಟ್ಯಾಕ್. ತೋಹೀದ್ ಕಿಮ್ಸ್ ಗೆ ದಾಖಲು

E
By ETV 24X7 Chief Admin
October 2, 2026 351 views 0 comments Edit Article
ಹಳೇ ದ್ವೇಷಕ್ಕೆ ಯುವಕನ ಮೇಲೆ ಹಲ್ಲೆ .ಹಾಕಿ ಸ್ಟಿಕ್ ರಾಡನಿಂದ ಅಟ್ಯಾಕ್. ತೋಹೀದ್ ಕಿಮ್ಸ್ ಗೆ ದಾಖಲು

ಹುಬ್ಬಳ್ಳಿಯ ಯಲ್ಲಾಪುರ ಎಂ.ಡಿ ಕಾಲೇಜ್, ಬಾದಾಮಿ ಕ್ಲಿನಿಕ್ ಹತ್ತಿರ ಬೆಳಿಗ್ಗೆ 10:30 ರ ಸುಮಾರಿಗೆ ಯುವಕನ ಮೇಲೆ ಹಲ್ಲೆಗೆ ಯತ್ನ ನಡೆದಿದೆ.

ಸಂತ್ರಸ್ತ ತೋಹೀದ್ ಮಿರ್ಜಾ ಅವರ ಪ್ರಕಾರ, ಒಂದು ವರ್ಷದ ಹಿಂದೆ ನಡೆದ ಗಲಾಟೆಯ ಹಳೇ ದ್ವೇಷಕ್ಕೆ ಅಫ್ತಾಬ್ ಮತ್ತು ಆತನ ತಂಡ ಸೇಡು ತೀರಿಸಿಕೊಳ್ಳಲು ಬಂದಿತ್ತು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹಳೇ ದ್ವೇಷಕ್ಕೆ ಯುವಕನ ಮೇಲೆ ಹಲ್ಲೆ - ಆಟೋ ಅಡ್ಡ ಹಾಕಿ ಸ್ಟಿಕ್ ನಿಂದ ಅಟ್ಯಾಕ್ | ತೋಹೀದ್ ಕಿಮ್ಸ್ ಗೆ ದಾಖಲು |"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ತೋಹೀದ್ ಮಿರ್ಜಾ ಕೆಲಸಕ್ಕೆ ಹೋಗಲು ಗಾಡಿ ತೆಗೆಯುತ್ತಿದ್ದಂತೆ, ಎದುರಿಗೆ ಆಟೋ ತಂದು ಅಡ್ಡ ಹಾಕಿ, ಸ್ಟಿಕ್ ಹಿಡಿದು ಹಲ್ಲೆ ನಡೆಸಿದ್ದಾರೆ. ಆಟೋದಲ್ಲಿ ಇಮ್ರಾನ್ ಕುಳಿತಿದ್ದ, ಇನ್ನೂ 4 ರಿಂದ 5 ಜನ ಎರಡು ಬೈಕ್ ಗಳಲ್ಲಿ ಬಂದಿದ್ದರು ಎಂದು ಆರೋಪಿಸಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಗಾಯಗೊಂಡ ತೋಹೀದ್ ಮಿರ್ಜಾನನ್ನು ಆತನ ಸ್ನೇಹಿತರು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬೆಂಡಿಗೇರಿ ಠಾಣೆಯ ಇನ್ಸ್‌ಪೆಕ್ಟರ್ ಎಸ್.ಆರ್ ನಾಯ್ಕ್ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.