Home / ಹುಬ್ಬಳ್ಳಿ-ಧಾರವಾಡ / ಕೇಕ್ ಕತ್ತರಿಸಲಿಲ್ಲಾ 200 ಮಕ್ಕಳ ನಗುವಿನಲ್ಲಿ...

ಕೇಕ್ ಕತ್ತರಿಸಲಿಲ್ಲಾ 200 ಮಕ್ಕಳ ನಗುವಿನಲ್ಲಿ ಜನ್ಮದಿನ ಕಂಡ ವೈದ್ಯ ಶ್ರೀಧರ್ ದಂಡಪ್ಪನವರ

E
By ETV 24X7 Chief Admin
September 18, 2026 393 views 0 comments Edit Article
ಕೇಕ್ ಕತ್ತರಿಸಲಿಲ್ಲಾ 200 ಮಕ್ಕಳ ನಗುವಿನಲ್ಲಿ ಜನ್ಮದಿನ ಕಂಡ ವೈದ್ಯ ಶ್ರೀಧರ್ ದಂಡಪ್ಪನವರ

ಹುಬ್ಬಳ್ಳಿ: ಜನ್ಮದಿನವನ್ನು ಕೇಕ್ ಕತ್ತರಿಸಿ ಸಂಭ್ರಮಿಸುವ ಬದಲು ಮಕ್ಕಳ ಮುಖದಲ್ಲಿ ನಗು ಮೂಡಿಸುವ ಮೂಲಕ ವೈದ್ಯರೊಬ್ಬರು ಮಾದರಿಯಾಗಿದ್ದಾರೆ.

ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಡಾ. ಶ್ರೀಧರ್ ದಂಡಪ್ಪನವರ ಅವರು ತಮ್ಮ ಜನ್ಮದಿನದ ಪ್ರಯುಕ್ತ ಗೋಪನಕೊಪ್ಪದ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ವಿತರಿಸಿದರು.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಕೇಕ್ ಕತ್ತರಿಸಲಿಲ್ಲಾ 200 ಮಕ್ಕಳ ನಗುವಿನಲ್ಲಿ ಜನ್ಮದಿನ ಕಂಡ ವೈದ್ಯ ಶ್ರೀಧರ್ ದಂಡಪ್ಪನವರ .ಆಡಂಬರದ ಜನ್ಮದಿನ ಬದಲು ಶಾಲಾ ಮಕ್ಕಳಿಗೆ ಬ್ಯಾಗ ಹಂಚಿದ  ವೈದ್ಯ ದಂಡಪ್ಪನವರ ದಂಪತಿಗಳು"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, "ಚೆನ್ನಾಗಿ ಓದಿ, ನಿಮ್ಮದೇ ಆದ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ. ನಿಮ್ಮ ತಂದೆ-ತಾಯಿಗೆ ಹೆಮ್ಮೆ ತರುವ ಸಾಧನೆ ಮಾಡಿ" ಎಂದು ಹಿತನುಡಿದರು.

ವೈಯಕ್ತಿಕ ಸಂಭ್ರಮಕ್ಕಿಂತ ಸಮಾಜಕ್ಕೆ ಕೊಡುಗೆ ಮುಖ್ಯ ಎಂಬ ಸಂದೇಶ ಸಾರಿದ ಈ ಸರಳ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.