Home / ಗದಗ / ಲಕ್ಷೇಶ್ವರ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ - ಟ್...

ಲಕ್ಷೇಶ್ವರ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ - ಟ್ರೇಲರ್‌ನಡಿ ಸಿಲುಕಿದ ಕೂಲಿಕಾರರು! 12 ಮಂದಿ ಕಿಮ್ಸ್‌ಗೆ!

E
By ETV 24X7 Chief Admin
October 31, 2026 224 views 0 comments Edit Article
ಲಕ್ಷೇಶ್ವರ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ - ಟ್ರೇಲರ್‌ನಡಿ ಸಿಲುಕಿದ ಕೂಲಿಕಾರರು!
  12 ಮಂದಿ ಕಿಮ್ಸ್‌ಗೆ!

ಗದಗ ಜಿಲ್ಲೆ ಲಕ್ಷೇಶ್ವರ ಪಟ್ಟಣದ ಶಿಗ್ಲಿ ರಸ್ತೆಯಲ್ಲಿ ಶನಿವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದೆ.

ಪಟ್ಟಣದ ಪ್ಯಾಟಿಕೇರಿ ಓಣಿಯ ಕೃಷಿ ಕೂಲಿಕಾರರು ಹತ್ತಿ ಬಿಡಿಸುವ ಕೆಲಸ ಮುಗಿಸಿ ಟ್ರ್ಯಾಕ್ಟರ್ ಟ್ರೇಲರ್‌ನಲ್ಲಿ ಮನೆಗೆ ಮರಳುತ್ತಿದ್ದಾಗ ಹಿಂಬದಿಯಿಂದ ಬಂದ ಖಾಸಗಿ ಬಸ್ ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ಟ್ರೇಲರ್ ಪಲ್ಟಿಯಾಗಿದ್ದು, ಕೆಲವರು ರಸ್ತೆಗೆ ಎಸೆಯಲ್ಪಟ್ಟರೆ ಇನ್ನು ಕೆಲವರು ಟ್ರೇಲರ್ ಅಡಿಯೇ ಸಿಲುಕಿಕೊಂಡಿದ್ದಾರೆ. 15ಕ್ಕೂ ಹೆಚ್ಚು ಮಂದಿಗೆ ಕೈಕಾಲು ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿವೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಲಕ್ಷೇಶ್ವರ ಟ್ರ್ಯಾಕ್ಟರ್‌ಗೆ ಬಸ್ ಡಿಕ್ಕಿ - ಟ್ರೇಲರ್‌ನಡಿ ಸಿಲುಕಿದ ಕೂಲಿಕಾರರು!12 ಮಂದಿ ಕಿಮ್ಸ್‌ಗೆ!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ತಕ್ಷಣವೇ ಸ್ಥಳೀಯರು, ಕಾಲೇಜು ವಿದ್ಯಾರ್ಥಿಗಳು ರಕ್ಷಣೆಗೆ ಧಾವಿಸಿ ಗಾಯಾಳುಗಳನ್ನು ಲಕ್ಷೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ 12 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಗಾಯಗೊಂಡವರಲ್ಲಿ ಅನಸೂಯಾ ಹುರಕನವರ, ನಿರ್ಮಲಮ್ಮ, ರತ್ನವ್ವ ಬಾಲೆಹೊಸೂರ, ಗಂಗವ್ವ ಹಡಗಲಿ, ಮಲ್ಲವ್ವ ಗದ್ದಿ ಸೇರಿದಂತೆ 13ಕ್ಕೂ ಹೆಚ್ಚು ಮಹಿಳಾ ಕೂಲಿಕಾರರು ಇದ್ದಾರೆ.

ಅಪಘಾತದ ಕುರಿತು ಲಕ್ಷೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರ

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.