ಸಾರ್ವಜನಿಕರೆ ಎಚ್ಚರ ಎಚ್ಚರ ಹು-ಧಾ ರೈತರ ಪ್ರತಿಭಟನೆಯಿಂದ 7 ರಸ್ತೆ ಬದಲಾವಣೆ! ವಾಹನ ಸವಾರರೇ ಗಮನಿಸಿ! ಟ್ರಾಫಿಕ್ ಅಲರ್ಟ್!
ರೈತ ಸಂಘಟನೆಗಳು ಕಬ್ಬಿನ ಬಿಲ್ ಹಾಗೂ ಬೇಡಿಕೆಗಳಿಗಾಗಿ ಯರಿಕೊಪ್ಪ ಕ್ರಾಸ್ ಹತ್ತಿರ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡ್ತಿವೆ. ಇದರಿಂದ ವಾಹನ ಸಂಚಾರ ಬದಲಾವಣೆ ಮಾಡಲಾಗಿದೆ!
7 ಪ್ರಮುಖ ಮಾರ್ಗ ಬದಲಾವಣೆ ಮಾಡಿ ಹುಬ್ಬಳ್ಳಿ ಧಾರವಾಡ ಪೊಲೀಸ ಕಮೀಷನರ್ ಅವರು ಪರ್ಯಾಯ ಮಾರ್ಗ ಸಾರ್ವತ್ರಿಕರಿಗೆ ಮಾಡಿಕೊಟ್ಟಿದ್ದು ಅವುಗಳಲ್ಲಿ ಪ್ರಮುಖ ವಾಗಿ ಹೀಗಿವೆ
*1. ನರೇಂದ್ರ ಬೈಪಾಸ್ ನಿಂದ ಹುಬ್ಬಳ್ಳಿ ಕಡೆಗೆ:*
ಏರ್ಟೆಕ್ -> ಅಗ್ರಿಕಲ್ಚರ್ ಯೂನಿವರ್ಸಿಟಿ ರಸ್ತೆ -> ಹೊಸ ಬಸ್ ನಿಲ್ದಾಣ -> ಹಳೇ SP ಕಚೇರಿ ಸರ್ಕಲ್ -> ಜುಬ್ಬಿ ಸರ್ಕಲ್ -> ಕಲಘಟಗಿ ಟೋಲ್ ನಾಕಾ -> ಗಾಂಧಿನಗರ -> ಹುಬ್ಬಳ್ಳಿ
*2. ಬೆಳಗಾವಿಯಿಂದ ಸವದತ್ತಿ / ನವಲಗುಂದ / ಬಿಜಾಪುರ ಕಡೆಗೆ:*
ಸವದತ್ತಿ: ಹಳೇ SP ಸರ್ಕಲ್ -> ಮರಾಠಾ ಕಾಲನಿ -> ಕಮಲಾಪುರ -> ಎಪಿಎಂಸಿ
ನವಲಗುಂದ/ಬಿಜಾಪುರ: ಹಳೇ SP ಸರ್ಕಲ್ -> ಮರಾಠಾ ಕಾಲನಿ -> ಶಿವಾಜಿ ಸರ್ಕಲ್ -> ಹೆಬ್ಬಳ್ಳಿ ಅಗಸಿ -> ನವಲಗುಂದ
*3. ಬೆಳಗಾವಿ / ಧಾರವಾಡದಿಂದ ಕಾರವಾರ / ಬೆಂಗಳೂರು (ಲಘು ವಾಹನ):*
ಹುಸೂರು ಸರ್ಕಲ್ -> ವಾಣಿ ವಿಲಾಸ ಸರ್ಕಲ್ -> ಎಂ.ಟಿ. ಮಿಲ್ ಸರ್ಕಲ್ -> ಇಂದಿ ಪಂಪ್ -> ಕಾರವಾರ ರಸ್ತೆ ಅಂಡರ್ ಬ್ರಿಡ್ಜ್
*4. ಭಾರಿ ವಾಹನಗಳ ಮಾರ್ಗ ಬದಲಾವಣೆ:*
ಹುಸೂರು ಸರ್ಕಲ್ -> ವಾಣಿ ವಿಲಾಸ -> ಗೋಕುಲ ರಸ್ತೆ -> ತಾರಿಹಾಳ ಅಂಡರ್ ಬ್ರಿಡ್ಜ್
TAGS:
ETV 24X7
Breaking
E
ETV 24X7 Chief Admin
Senior Staff Journalist and Correspondent at ETV 24X7. Covering breaking global stories, contemporary culture, and modern innovations.