Home / ಕ್ರೈಂ / ಹುಬ್ಬಳ್ಳಿಗೆ ಬಾ*ಬ್ ಬೆದರಿಕೆ! ಪಾಲಿಕೆಗೆ DCP...

ಹುಬ್ಬಳ್ಳಿಗೆ ಬಾ*ಬ್ ಬೆದರಿಕೆ! ಪಾಲಿಕೆಗೆ DCP ಶೃತಿ ಭೇಟಿ - ಆಯುಕ್ತರ ಕಚೇರಿಯಲ್ಲಿ ಪರಿಶೀಲನೆ, ಹಬ್ಬದ ದಿನ ಹೈ ಅಲರ್ಟ್!

E
By ETV 24X7 Chief Admin
November 9, 2026 351 views 0 comments Edit Article
ಹುಬ್ಬಳ್ಳಿಗೆ ಬಾ*ಬ್ ಬೆದರಿಕೆ! ಪಾಲಿಕೆಗೆ DCP ಶೃತಿ ಭೇಟಿ - ಆಯುಕ್ತರ ಕಚೇರಿಯಲ್ಲಿ ಪರಿಶೀಲನೆ, ಹಬ್ಬದ ದಿನ ಹೈ ಅಲರ್ಟ್!

ಹುಬ್ಬಳ್ಳಿಯಿಂದ ಬಿಗ್ ಬ್ರೇಕಿಂಗ್ ನ್ಯೂಸ್. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ ಬಂದಿದೆ. ಹಬ್ಬದ ದಿನವೇ ಈ ಬೆದರಿಕೆ ಬಂದಿರೋದ್ರಿಂದ ಹುಬ್ಬಳ್ಳಿ ಜನತೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇಂದು ಬೆಳಿಗ್ಗೆ 11:35 ಕ್ಕೆ ಪಾಲಿಕೆ ಆಯುಕ್ತರಿಗೆ ಮೇಲ್ ಮೂಲಕ ಈ ಬೆದರಿಕೆ ಬಂದಿದೆ.

ಆ ಮೇಲ್‌ನಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿದ್ದು, ನವೆಂಬರ್ 29 ರಂದು ನಡೆಯುವ ಕಾರ್ಯಕ್ರಮದ ಸ್ಥಳದಲ್ಲಿ ಹಾಗೂ ಬೆಂಗಳೂರಿನಲ್ಲಿ ಸ್ಫೋಟದ ಬೆದರಿಕೆಯನ್ನು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಶೃತಿ ಅವರು ಮಹಾನಗರ ಪಾಲಿಕೆಗೆ ಭೇಟಿ ನೀಡಿದ್ದಾರೆ.

Instagram Reel @etv24x7_kannada_official
Instagram ನಲ್ಲಿ ವೀಕ್ಷಿಸಿ
Etv24×7 on Instagram: "ಹುಬ್ಬಳ್ಳಿಗೆ ಬಾ*ಬ್ ಬೆದರಿಕೆ! ಪಾಲಿಕೆಗೆ DCP ಶೃತಿ ಭೇಟಿ - ಆಯುಕ್ತರ ಕಚೇರಿಯಲ್ಲಿ ಪರಿಶೀಲನೆ, ಹಬ್ಬದ ದಿನ ಹೈ ಅಲರ್ಟ್!"
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Reel

ಆಯುಕ್ತರ ಕಚೇರಿ ಒಳಗೆ ಪರಿಶೀಲನೆ ನಡೆಸಿದ ಡಿಸಿಪಿ ಶೃತಿ ಅವರು, ಸಿಬ್ಬಂದಿ ಬಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಬೆದರಿಕೆ ಮೇಲ್ ಪರಿಶೀಲನೆ ಮಾಡುತ್ತಿರುವ ಪೊಲೀಸರು, ಮೇಲ್ ಬಂದ ಮೂಲದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ.

YouTube Video Preview
ಪ್ಲೇ ಮಾಡಲು ಕ್ಲಿಕ್ ಮಾಡಿ • Watch Video

ಹಬ್ಬದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಾರ್ವಜನಿಕರು ಆತಂಕ ಪಡಬೇಡಿ, ಅನುಮಾನಾಸ್ಪದ ವಸ್ತು ಕಂಡರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ.

ಈ ಕುರಿತ ಹೆಚ್ಚಿನ ಅಪ್ಡೇಟ್ ಗಾಗಿ ನೋಡ್ತಾ ಇರಿ, ನಿಮ್ಮ ನೆಚ್ಚಿನ ಈ ಟಿವಿ 24X7.

TAGS: ETV 24X7 Breaking
SHARE THIS ARTICLE
E

ETV 24X7 Chief Admin

Senior Staff Journalist and Correspondent at ETV 24X7. Covering breaking global stories, contemporary culture, and modern innovations.

ETV 24X7 Live Search

Search Articles

Type any keyword to instantly search stories across categories.